ಕಾಯಿಸಿದೆ, ಕಂಗೆಡಿಸಿದೆ,
ಕೊನೆಗೂ ಒಲಿದು ಬಂದೆ,
ಕೊನೆಗೂ ಒಲಿದು ಬಂದೆ,
ಮುಡಿಯಿಂದ ಅಡಿವರೆಗೂ,
ತೋಯಿಸಿ ನೀ ಬಂದೆ,
ತೋಯಿಸಿ ನೀ ಬಂದೆ,
ಝರಿಯಾಗಿ, ತೊರೆಯಾಗಿ,
ಅರಿದು ನೀ ಬಂದೆ.
ಅರಿದು ನೀ ಬಂದೆ.
ಹಸಿರಾಗಿ, ಚಿಗುರೆಲೆಯಾಗಿ,
ಎಲೆ ತುದಿಯ ಇಬ್ಬನಿಯಾಗಿ,
ನೀ ಮನತುಂಬಿದೆ,
ಪುಟಿದು ಕುಣಿವ ಜಿಂಕೆಯ,
ಸಂತಸವಾಗಿ ನೀ ಬಂದೆ,
ಗರಿಗೆದರಿದ ನವಿಲ,
ಸೌಂದರ್ಯದಲಿ ನೀ ಕಂಡೆ.
ಮಣ್ಣ ಮನವ ಮುಟ್ಟಿ,
ಘಮವಾಗಿ ನೀ ಸುಳಿದೆ,
ಬಿಸಿಲ ಬೇಗೆಯ ನೀಗಿ,
ಧರೆಯ ಕೊಳೆಯ ತೊಳೆಯಲು,
ನೀ ಸುರಿದೆ.
ಜಗದ ನಗುವಾಗಿ ನೀ ಬಂದೆ,
ಓ ವರ್ಷದಾರೆ,
ಮುಂಗಾರಿನ ಮುನ್ನುಡಿಯಾಗಿ,
ನೀ ಬಂದೆ.
ಯಾರು ಬಂದಿದ್ದು?
ReplyDeleteವರ್ಷ?
ಹ್ಹ ಹ್ಹ ಹ್ಹಾ..........
ಚಂದದ ಕವನ.
ನನ್ನ ಬ್ಲಾಗ್ ನಲ್ಲಿ ನಾನು ಮಾತ್ರ ಬರೆಯಲು ಸಾದ್ಯ ??
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..!
Yeshu,
ReplyDeleteಯಾರು ಬರೆದದ್ದು ಎಂದು ಕೇಳಲಿಲ್ಲ :P
ಒಲಿದು ಬಂದಿದ್ದು ಯಾರು ಅಂತ ಕೇಳಿದ್ದು..............
-:) ಒಲಿದು ಬಂದದ್ದು ವರ್ಷದಾರೆ ಬೇರೆ ಯಾರು ಅಲ್ಲ....!
ReplyDelete