ಬಿಇ-ಗಿಇ ಮುಗಿಸಿಕೊಂಡು
ಎಪ್ಪತ್ತು ಪರ್ಸೆಂಟ್ ಮಾರ್ಕ್ಸ್ ತಗೊಂಡು
ಮಣಿಪಾಲದಲ್ಲಿ ಬಂದು ಕೂತ್ಕೋ
ಲೈಫು ಇಸ್ಟೇನೆ...!
ಮಣಿಪಾಲದಲ್ಲಿ ಸೆಕೆ ಅಂತೆ
ಎಲ್ಲಾ ಕಡೆ ಬೆವರು ಬರುತ್ತೆ
ಫ್ಯಾನ್ ಬಿಟ್ಟು ಬದುಕಲೇ ಬೇಡ
ಲೈಫು ಇಸ್ಟೇನೆ...!
ಹಗಲಿನಲ್ಲಿ ಕ್ಲಾಸ್ಗೆ ಹೋಗು
ರಾತ್ರಿಯಲ್ಲಿ discussion ಮಾಡು
ಅಂತು-ಇಂತೂ ಟ್ರೈನಿಂಗ್ ಮುಗಿಸು
ಲೈಫು ಇಸ್ಟೇನೆ...!
ಕೆಲಸ ಸ್ಟಾರ್ಟ್ ಆದ ತಕ್ಷಣ
ವೀಕೆಂಡ್ಗಾಗಿ ವೈಟ್ ಮಾಡು
ಬೆಳಗ್ಗೆ ಲೇಟಾಗಿ ನಿದ್ದೆ ಮಾಡು
ಲೈಫು ಇಸ್ಟೇನೆ...!
friday ನೈಟ್ ಪಾರ್ಟಿ ಮಾಡು
ಎಂಡ್ ಪಾಯಿಂಟ್ ಸುತ್ತಿ ನೋಡು
ಉಡುಪಿ ಕೃಷ್ಣಗೆ ಸಲಾಮು ಮಾಡು
ಲೈಫು ಇಸ್ಟೇನೆ...!
ಹಿಂದಿ, ಇಂಗ್ಲಿಷ್ ಸಿನೆಮಾ ನೋಡು
ಕನ್ನಡ ಚಿತ್ರ ಅಂದ್ರೆ ಬೈಯೀ
ಬೀಚ್ ಗೆ ಹೋಗಿ ಬೈಕ್ ಓಡಿಸು
ಲೈಫು ಇಸ್ಟೇನೆ...!
ಮೆಸ್ಸ್ ಊಟ ಬೇಜಾರಾಯ್ತು
ಹೊರಗಿನ ಊಟ ಇಷ್ಟ ಇಲ್ಲ
ಮನೆಯಲ್ಲಿ ಅಡುಗೆ ಮಾಡ್ಕೋ
ಲೈಫು ಇಸ್ಟೇನೆ...!
ಅವರನ್ನ-ಇವರನ್ನ ಕಾಡಿಕೊಂಡು
ಗೊಸ್ಸಿಪನ್ನ(gossip ) ಮಾತಾಡಿಕೊಂಡು
ನಾಲ್ಕು ವರ್ಷ ಮುಗಿದೇ ಹೋಯ್ತು
ಲೈಫು ಇಸ್ಟೇನೆ...!